ಉಡುಪಿಯಲ್ಲಿ ಇಳಿಮುಖವಾದ ಕೊರೋನಾ ಸೋಂಕಿನ ಪ್ರಮಾಣ

ಉಡುಪಿ (ಜೂ.29): ಜಿಲ್ಲೆಯಲ್ಲಿ ಕೋವಿಡ್‌ ಪ್ರಮಾಣ ದಿನೇ ದಿನೇ ಇಳಿಮುಖವಾಗುತ್ತಿದ್ದು, ಭಾನುವಾರ 96 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ 31 ಪುರುಷರು ಹಾಗೂ 67 ಮಹಿಳೆಯರು ಎಂದು ಗುರುತಿಸಲಾಗಿದೆ.

ಉಡುಪಿ ತಾಲ್ಲೂಕಿನ 43, ಕುಂದಾಪುರದ 37, ಕಾರ್ಕಳ ತಾಲ್ಲೂಕಿನ 16 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 8 ಸೋಂಕಿತರು ಆಸ್ಪತ್ರೆಯಲ್ಲಿ ಉಳಿದ 88 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ.

ಕೋವಿಡ್‌ ಮರಣ ಪ್ರಮಾಣವೂ ಕುಸಿಯುತ್ತಿದ್ದು, ಜೂನ್‌ 18ರಂದು ಮೂವರು, 19ರಂದು ಇಬ್ಬರು, 20 ಹಾಗೂ 21ರಂದು ತಲಾ ಒಬ್ಬರು, 22ರಂದು ಇಬ್ಬರು, 23ರಂದು ಮೂವರು, 24ರಂದು 7 ಮಂದಿ, 25 ಹಾಗೂ 26ರಂದು ಇಬ್ಬರು, 27ರಂದು ಒಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ 3,08,328 ಮಂದಿಗೆ ಕೋವಿಡ್ ಪರೀಕ್ಷೆಗೊಳಪಡಿಸಲಾಗಿದ್ದು, 66,736 ಜನರಲ್ಲಿ ಸೋಂಕು ದೃಢಪಟ್ಟಿದೆ. ಇವರಲ್ಲಿ 64,736 ಸೋಂಕಿತರು ಗುಣಮುಖರಾಗಿದ್ದು, 1,010 ಸಕ್ರಿಯ ಸೋಂಕಿತರು ಮಾತ್ರ ಇದ್ದಾರೆ.

Leave a Comment

Your email address will not be published.