ಉಡುಪಿ: ನಗರ ಪ್ರಾಥಮಿಕ ಆರೋಗ್ಯ ಕೇಂದ್ರ-ಬನ್ನಂಜೆ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರಿಗೆ ದಿನಸಿ ಕಿಟ್ ವಿತರಣೆ

ಉಡುಪಿ: ನಗರ ಪ್ರಾಥಮಿಕ ಆರೋಗ್ಯ ಕೇಂದ್ರ-ಬನ್ನಂಜೆ, ಇಲ್ಲಿನ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ನಗರಸಭಾ ಸದಸ್ಯರು ಮತ್ತು ಪ್ರತಿಪಕ್ಷ ನಾಯಕರಾದ ರಮೇಶ್ ಕಾಂಚನ್ ಹಾಗೂ ಉದ್ಯಮಿಗಳಾದ ಮುರಳಿ ಶೆಟ್ಟಿ, ಗಣೀಶ್ ದೇವಾಡಿಗ, ಗಣೇಶ್ ನೆರ್ಗಿ, ರಮೇಶ್ ಪಾಲ್, ರಿಕಿತ್‌ ಇವರ ಸಹಕಾರದೊಂದಿಗೆ ಮುಖಕವಚ, ಮಾಸ್ಕ್‌ ಮತ್ತು ದಿನಸಿ ಕಿಟ್‌ಗಳನ್ನು ಇಂದು ವಿತರಿಸಲಾಯಿತು.

ನಗರಸಭಾ ಸದಸ್ಯರಾದ ರಮೇಶ್ ಕಾಂಚನ್ ಅವರು ಮಾತನಾಡಿ ಇಂಥಹ ಸಂಕಷ್ಟದ ಕಾಲದಲ್ಲಿ ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡುವ ಆಶಾ ಕಾರ್ಯಕರ್ತರ ಸೇವೆ ಶ್ಲಾಘನೀಯ. ತಮ್ಮ ಜೀವದ ಹಂಗು ತೊರೆದು ಕೊರೋನಾ ಮಹಾಮಾರಿಯ ಬಗ್ಗೆ ಜನಜಾಗೃತಿ ಮೂಡಿಸುವ ಜತೆಗೆ ಸೋಂಕಿತರಲ್ಲಿ ದೈರ್ಯ ತುಂಬುತ್ತಿರುವ ತಮ್ಮ ಸೇವೆ ಅಭಿನಂದನೀಯ ಎಂದು ಇಂಥಹ ಕಷ್ಟದ ಸಮಯದಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತರಿಗೆ ಕ್ಲಪ್ತ ಸಮಯದಲ್ಲಿ ವೇತನವನ್ನು ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

*ಈ ಸಂದರ್ಭದಲ್ಲಿ ಕೇಂದ್ರದ ವೈದ್ಯಾಧಿಕಾರಿ ಡಾ ಹೇಮಂತ್, ಲ್ಯಾಬ್ ಟೆಕ್ನಿಷಿಯನ್ ರಮೇಶ್ ನಾಯ್ಕ್, ಕಛೇರಿ ಸಹಾಯಕಿ ಪ್ರಮಿಳಾ, ರಘುರಾಮ್ ಭಟ್, ಸಂಜಯ್ ಆಚಾರ್ಯ, ಆಶಾ ಸುಗಮಕಾರರಾದ ಹಿಮಾ ವರ್ಗಿಸ್ ಹಾಗೂ ಕೇಂದ್ರದ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment

Your email address will not be published.