ಕೋವಿಡ್ ಹಿನ್ನಲೆ: ಐ.ಪಿ.ಎಲ್ ರದ್ದು

ಹೊಸದಿಲ್ಲಿ: ಆಟಗಾರರಲ್ಲಿ ಕೋವಿಡ್-19 ಸೋಂಕು ಕಂಡು ಬರುತ್ತಿರುವ ಕಾರಣದಿಂದ ಈ ಬಾರಿಯ ಐಪಿಎಎಲ್ ಕೂಟವನ್ನು ರದ್ದು ಮಾಡಲು ಬಿಸಿಸಿಐ ನಿರ್ಧರಿಸಿದೆ.

ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಈ ಬಗ್ಗೆ ಮಾಹಿತಿ ನೀಡಿದ್ದು, 2021ನೇ ಸಾಲಿನ ಐಪಿಎಲ್ ಕೂಟವನ್ನು ರದ್ದು ಮಾಡಲಾಗಿದೆ ಎಂದಿದ್ದಾರೆ.

ಸೋಮವಾರ ಇಬ್ಬರು ಆಟಗಾರರು ಸೇರಿದಂತೆ ಒಟ್ಟು ಐದು ಮಂದಿಗೆ ಕೋವಿಡ್ ಸೋಂಕು ದೃಢವಾಗಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಬಾಲಾಜಿ, ಸಿಎಓ ವಿಶ್ವನಾಥನ್ ಮತ್ತು ಬಸ್ ಕ್ಲೀನರ್ ಗೆ ಕೋವಿಡ್ ಸೋಂಕು ದೃಢವಾಗಿತ್ತು.

Leave a Comment

Your email address will not be published.