ದುಬೈ ನಲ್ಲಿ ವರ್ಣರಂಜಿತ ಕ್ರಿಕೆಟ್ ಹಬ್ಬ ಯುನೈಟೆಡ್ ಪ್ರೀಮಿಯರ್ ಲೀಗ್-2021

ದುಬೈ ನ ಪ್ರತಿಷ್ಠಿತ ಸಂಸ್ಥೆ River Valley ಮುಖ್ಯಸ್ಥರಾದ ಮಿ.ರಫೀಕ್ ಇವರ ಪ್ರಮುಖ ಪ್ರಾಯೋಜಕತ್ವದಲ್ಲಿ,
ಸಲ್ಮಾನ್,ರೆಹಮತ್ ಹೊನ್ನಾಳ,M.H.T ಹಾಗೂ ಈಶಾಮ್ ಇವರೆಲ್ಲರ ಮುಂದಾಳತ್ವದಲ್ಲಿ ಜೂನ್ 17 ರಂದು ದುಬೈ ಸ್ಕೌಟ್ ಮಿಷನ್ ಮೈದಾನದಲ್ಲಿ ಅದ್ಧೂರಿಯ ಯುನೈಟೆಡ್ ಪ್ರೀಮಿಯರ್ ಲೀಗ್-2021 40 ಗಜಗಳ ಹೊನಲು ಬೆಳಕಿನ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.

ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಪಂದ್ಯಾಟ ಮೂಡಿಬರಲಿದ್ದು,5 ಓವರ್ ನ 12 ರೋಚಕ ಹಣಾಹಣಿಗಳು ನಡೆಯಲಿದೆ.ನಿಗದಿತ 9 ತಂಡಗಳಿಗಷ್ಟೇ ಭಾಗವಹಿಸಲು ಅವಕಾಶವಿದ್ದು,ಪ್ರವೇಶ ದರ 400 A.E.D ಹಾಗೂ ವಿಜೇತ ತಂಡ 1ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದೆ.

ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್‌ಮನ್‌ ಪೂಮಾ ಶೂ,ಬೆಸ್ಟ್ ಬೌಲರ್ ನೈಕ್ ಶೂ,ಬೆಸ್ಟ್ ಕೀಪರ್ ಸ್ಮಾರ್ಟ್ ಟಿ.ವಿ,ಹ್ಯಾಟ್ರಿಕ್ ವಿಕೆಟ್ ಪಡೆವ ಬೌಲರ್ ಬುರ್ಜ್ ಖಲೀಫಾ ಟಿಕೆಟ್,ಬೆಸ್ಟ್ ಫೀಲ್ಡರ್ ದುಬಾರಿ ಸುಗಂಧ ದ್ರವ್ಯ,ಫೈನಲ್ ನ ಪಂದ್ಯಶ್ರೇಷ್ಟ ಚಿನ್ನದ ನಾಣ್ಯ ಹಾಗೂ ಸರಣಿಶ್ರೇಷ್ಟ ಪ್ರಶಸ್ತಿ ರೂಪದಲ್ಲಿ ಎಲ್.ಇ.ಡಿ ಟಿ.ವಿ ಹಾಗೂ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.

ಟೊರ್ಪೆಡೋಸ್ ಕುಂದಾಪುರ ಹಾಗೂ ಸನ್ ರೈಸ್ ಹೊನ್ನಾಳ ಪ್ರದರ್ಶನ ಪಂದ್ಯ

ಜೂನ್ 17 ರಾತ್ರಿ 8 ಗಂಟೆಗೆ ಪಂದ್ಯಾಟ ಪ್ರಾರಂಭವಾಗಲಿದ್ದು,10 ಗಂಟೆಗೆ ವರ್ಣರಂಜಿತ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 10.30 ಗಂಟೆಗೆ ಸರಿಯಾಗಿ ಉಡುಪಿ ಜಿಲ್ಲೆಯ 2 ಪ್ರಸಿದ್ಧ ಸಂಸ್ಥೆಗಳಾದ ಟೊರ್ಪೆಡೋಸ್ ಕುಂದಾಪುರ ಹರಿಪ್ರಸನ್ನ ಪುಟ್ಟ ಸಾರಥ್ಯದಲ್ಲಿ ಹಾಗೂ ಸನ್ ರೈಸ್  ಹೊನ್ನಾಳ ರೆಹಮತ್ ಹೊನ್ನಾಳ ಸಾರಥ್ಯದಲ್ಲಿ ಪ್ರದರ್ಶನ ಪಂದ್ಯ ನಡೆಯಲಿದೆ.ಬೆಳಿಗ್ಗೆ 5 ಗಂಟೆಗೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಆಸಕ್ತ ತಂಡಗಳು ಜೂನ್ 2 ರ ಒಳಗೆ ನೋಂದಣಿ ಮಾಡಿಕೊಳ್ಳಬಹುದು.ಹೆಚ್ಚಿನ ವಿವರಗಳಿಗಾಗಿ ರೆಹಮತ್ ಹೊನ್ನಾಳ 971588569104 ಮೊಬೈಲ್ ನಂಬರ್ ಸಂಪರ್ಕಿಸಬಹುದು.

Leave a Comment

Your email address will not be published.