ಬಿಜೆಪಿ ತೋಡಿದ ಖೆಡ್ಡಾ ಪ್ರಶಾಂತ್ ಕಿಶೋರ್ ಆದರೆ ಈಗ ಮುಳುವಾಗಿರುವುದು ಬಿಜೆಪಿಗೆ!

2014 ರ ಚುನಾವಣೆ ಎಲ್ಲರಿಗೂ ನೆನಪಿದೆ. ಮೋದಿ 282 ಸ್ಥಾನಗಳೊಂದಿಗೆ ವಿಜಯ ಸಾಧಿಸಿದ್ದರು. ಈ ಸಾಧನೆಯ ಹಿಂದೆ ಒರ್ವ ವ್ಯಕ್ತಿಯ ಕುಟಲೋಪಯಗಳು ಕೂಡ ಅಡಗಿದೆ ಎಂಬುವುದು ವಾಸ್ತವ. ವಿರೋಧ ಪಕ್ಷಗಳ ವೈಫಲ್ಯವನ್ನು ಜನರ ಮುಂದೆ ತರುವುದ ಮತ್ತು ಮೋದಿಯ ಪೊಳ್ಳು ಹಿರೋಯಿಝಮ್ ಸೃಷ್ಟಿಸಿ ಜನರನ್ನು ನಂಬಿಸುವುದು ಇದು 2014ರ ಸ್ಟ್ಯಾಟರ್ಜಿ. ಈ ಸ್ಟ್ಯಾಟರ್ಜಿಯ ಮಾಸ್ಟರ್ ಮೈಂಡ್ ಆಗಿದಿದ್ದು ಇಂದಿನ ಬಿಜೆಪಿಯ ಶತ್ರು ಅಂದಿನ ಮಿತ್ರ ಪ್ರಶಾಂತ್ ಕಿಶೋರ್.

2011 ರಲ್ಲಿ ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗುವ ಮುನ್ನ ಪ್ರಶಾಂತ್ ಕಿಶೋರ್’ರಿಗೆ ಚುನಾವಣೆಯ ಜವಾಬ್ದಾರಿ ವಹಿಸಿದ್ದರು. ನಂತರ ಇದೇ ಯಶಸ್ಸು ಲೋಕಸಭಾ ಚುನಾವಣೆಯಲ್ಲಿ ಪಡೆಯಲು ಪ್ರಶಾಂತ್ ಕಿಶೋರ್ ಮತ್ತೆ ಬಿಜೆಪಿ ಬಳಸಿಕೊಂಡಿತು. 2014 ರಲ್ಲಿ ನಡೆದ ಎಲ್ಲ ಹೈಡ್ರಾಮಗಳ ಹಿಂದಿನ ಸೂತ್ರಧಾರ ಪ್ರಶಾಂತ್ ಕಿಶೋರ್!. ಗುಜರಾತಿಗೆ ಮಾತ್ರ ಸಿಮೀತವಾಗಿದ್ದ ಮೋದಿಯನ್ನು ದೇಶದ ಹೀರೋವಾಗಿ ಪರಿವರ್ತಿಸಲು ಪ್ರಶಾಂತ್ Citizens for Accountable Governance (CAG) ಸಂಸ್ಥೆ ಸ್ಥಾಪಿಸಿ ಹಲವು ವಿಧಧ ಚುನಾವಣಾ ಪ್ರಚಾರ ಅಭಿಯಾನಗಳನ್ನು ರಚಿಸಿ ತನ್ನ ತಂಡದ ಮೂಲಕ ಶ್ರಮಿಸಿದರು.

ಗುಜರಾತಿನ ಗಲಭೆಯ ನಂತರ ಇಡೀ ದೇಶದಲ್ಲಿ ಮೋದಿಯ ಕುರಿತಾಗಿ ಜನರಲ್ಲಿ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಆದರೆ ಹಾರ್ಡ್ಕೋರ್ ಹಿಂದುತ್ವವಾದಿಯೆಂಬ ಪಟ್ಟ ಖಂಡಿತ ಇತ್ತು. ಇದೀಗ ಮೋದಿಯ ವರ್ಚಸನ್ನು ಬದಲಾಯಿಸುವುದು ಪ್ರಶಾಂತ್ ಕಿಶೋರ್ ಜವಾಬ್ದಾರಿಯಾಗಿತ್ತು. ಅದಕ್ಕಾಗಿ 2014 ರ ಚುನಾವಣೆಯ ಮುನ್ನ ಹಲವು ಸ್ಲೊಗನ್ ಗಳನ್ನು ಹುಟ್ಟು ಹಾಕಲಾಗಿತ್ತು. ಮೋದಿಯ ಕೋಮುವಾದದ ಮುಖ ಜನರ ಮನ ಮಸ್ತಿಷ್ಕದಿಂದ ಅಳಿದು ಅಭಿವೃದ್ಧಿ ಪುರುಷನೆಂಬ ಒಂದು ಮಿಥ್ಯ ಸ್ವರೂಪ ಸೃಷ್ಟಿಸಬೇಕಾಗಿತ್ತು. ಆ ಕಾರಣಕ್ಕಾಗಿ ಅಬ್ಕಿ ಬಾರ್ ಮೋದಿ ಸರ್ಕಾರ್, ‘ಚಾಯ್ ಪೆ ಚರ್ಚಾ’, ತ್ರಿ ಡಿ ರ಼್ಯಾಲಿ, ರನ್ ಫಾರ್ ಯುನಿಟಿ, ಮಂಥನ ಸೇರಿದಂತೆ ಹಲವಾರು ಬಗೆಯ ಸಾಮಾಜಿಕ ಜಾಲತಾಣದಲ್ಲಿ ಸಕಾರಾತ್ಮಕ ಕಾರ್ಯಕ್ರಮಗಳನ್ನು ಮಾಡಿ ಮುಖ್ಯವಾಗಿ ಯುವಜನರ ಬಳಿ ನರೇಂದ್ರ ಮೋದಿಯವರ ವರ್ಚಸ್ಸು ಋಣಾತ್ಮಕತೆಯ ಬಂಧದಿಂದ ಹೊರ ಬರುವಂತೆ ನೋಡಿಕೊಳ್ಳಲಾಯಿತು. ಅದರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವರ್ಚಸ್ಸನ್ನು ಅತ್ಯಂತ ಹೀನಾಯವಾಗಿ ತೋರಿಸುವ ಪ್ರಯತ್ನ ನಡೆಯಿತು. ಅವರನ್ನು ಉದ್ದೇಶಪೂರ್ವಕವಾಗಿಯೇ ‘ಪಪ್ಪು’ ಎಂದು ಅನ್ವರ್ಥಕನಾಮ ಕೊಟ್ಟು ಜನರ ದೃಷ್ಟಿಯಲ್ಲಿ ಅವರು ದೇಶ ಮುನ್ನಡೆಸಲು ಅಸಮರ್ಥರು ಎಂಬ ಫಾಲ್ಸ್ ಇಮೇಜಿನೇಷನ್ ಸೃಷ್ಟಿಸಲಾಯಿತು. ಈ ಎಲ್ಲ ಕಸರತ್ತಿನ ಹಿಂದೆ ಅಡಗಿದ್ದ ವ್ಯಕ್ತಿ ಪ್ರಶಾಂತ್ ಕಿಶೋರ್ ಆಗಿದ್ದರು. ಅವರ ಸ್ಟ್ಯಾಟರ್ಜಿ ಬಿಜೆಪಿ ಮತ್ತು ಆರ್.ಎಸ್.ಎಸ್ ಕಾರ್ಯಕರ್ತರ ಅನುಷ್ಠಾನದ ಜುಗಲ್ ಬಂದಿ ಅಸಮರ್ಥನನ್ನು ಸಮರ್ಥನಾಗಿ ತೋರಿಸುವಲ್ಲಿ ಯಶಸ್ವಿಯಾಗಿದ್ದರು. ಅದರ ಪ್ರತಿಫಲವಾಗಿ ಬಿಜೆಪಿ ಸರಕಾರ 282 ಸ್ಥಾನ ಗೆದ್ದುಕೊಂಡು ಭರ್ಜರಿ ವಿಜಯ ಸಾಧಿಸಿತು.

ಪ್ರಶಾಂತ್ ಕಿಶೋರ್ ಈ ಹೊತ್ತಿಗೆ ದೇಶದ ಪ್ರಜಾಪ್ರಭುತ್ವವನ್ನು ಆಡಿಸುವ ವ್ಯಕ್ತಿಯಾಗಿ ಬದಲಾಗಿ ಆಗಿತ್ತು. ಪ್ರಜಾಪ್ರಭುತ್ವದಲ್ಲಿ ಯಾವ ಪ್ರಭಾವವಿಲ್ಲದೆ ಜನರ ಸ್ವಂತ ಅಭಿಪ್ರಾಯದೊಂದಿಗೆ ಸರಕಾರವನ್ನು ಅಥವಾ ಜನ ಪ್ರತಿನಿಧಿಗಳನ್ನು ಚುನಾಯಿಸಬೇಕೆಂಬ ಮಾತಿದೆ. ಆದರೆ ಪ್ರಶಾಂತ್ ಈ ನಂಬಿಕೆಯ ವಿರುದ್ಧವೇ ಆಟವಾಡುತ್ತಿದ್ದರು. ಪ್ರಜಾಪ್ರಭುತ್ವದ ನಂಬಿಕೆಗಳನ್ನು ಗಾಳಿಗೆ ತೂರಿ ಜನಾಭಿಪ್ರಾಯವನ್ನು ಟೈಮ್ ಬೀಯಿಂಗ್ ವರ್ಚಸ್ಸು ಸೃಷ್ಟಿಸಿ ಬದಲಾಯಿಸುತ್ತಿದ್ದರು. ಇದು ಒಂದು ರೀತಿಯ ಪ್ರಜಾಪ್ರಭುತ್ವದ ಮೌಲ್ಯದೊಂದಿಗಿನ ಮೋಸ ಕೂಡ. ತನ್ನ CAG ಯನ್ನು ನಂತರ Indian Political Action Committee (I-PAC) ಬದಲಾಯಿಸಿದ ಪ್ರಶಾಂತ್ ಕಿಶೋರ್ ನಂತರ ಭಾರತದ ಚುನಾವಣೆಯಲ್ಲಿ so called ರಾಜಕೀಯ ಚಾಣಾಕ್ಷ ಎಂದು ಮಾಧ್ಯಮಗಳಿಂದ ಬಿರುದು ಪಡೆದುಕೊಂಡರು. I-PAC ಸಂಸ್ಥೆ 2015 ರಲ್ಲಿ ಬಿಹಾರದ ನಿತೀಶ್ ಪರವಾಗಿ ಕೆಲಸ ಮಾಡಿ ‘ನಿತೀಶ್ ಕೆ ನಿಶ್ಚಯ್; ವಿಕಾಸ್’ಗೆ ಗ್ಯಾರಂಟಿ’ ಎಂಬ ಸ್ಲೋಗನಿನ ಮೂಲಕ ಬಿಹಾರದಲ್ಲಿ ಆರ್.ಜೆ.ಡಿಯು ಪಕ್ಷ ಅಧಿಕಾರಕ್ಕೆ ಬಂದಿತ್ತು.

ಪ್ರಜಾಪ್ರಭುತ್ವದ ಆತ್ಮ ಚುನಾವಣೆ ಅದರೊಂದಿಗೆ ಸ್ಟ್ಯಾಟರ್ಜಿಯ ಹೆಸರಿನಲ್ಲಿ ಪ್ರಶಾಂತ್ ಕಿಶೋರ್ ಆಡುತ್ತಿದ್ದರು. ಭಾರತದ ರಾಜಕೀಯಕ್ಕೆ ಬರುವ ಮುನ್ನ ಪ್ರಶಾಂತ್ ವಿಶ್ವ ಸಂಸ್ಥೆಯಲ್ಲಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಈ ಅನುಭವ, ಜ್ಞಾನ ಮತ್ತು ಬುದ್ದಿವಂತಿಕೆಯನ್ನು ಬಂಡವಾಳವನ್ನಾಗಿಸಿ ಪಕ್ಷಗಳ ಭವಿಷ್ಯ ನಿರ್ಧರಿಸಲು ಆರಂಭಿಸಿದರು. ಪ್ರಶಾಂತ್ ಕಿಶೋರ್ BJP, INC, AAP, YSRCP , DMK and TMC ಹೀಗೆ ದೇಶದ ಪ್ರಮುಖ ಪಕ್ಷಗಳ ರಾಜಕೀಯ ನೀತಿ ನಿರೂಪಕನಾಗಿ ಸೇವೆ ಸಲ್ಲಿಸಿದ್ದಾರೆ.

2017 ರಲ್ಲಿ ನಡೆದ ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಕೂಡ ಇವರನ್ನು ಬಳಸಿಕೊಂಡಿತು. ಈ ಚುನಾವಣೆಯಲ್ಲಿ ಅಮೃಂಧರ್ ಸಿಂಗ್ ಗೆಲುವಿಗಿಂತ ಕಿಶೋರ್ ಗೆಲುವು ಎಂದು ಸ್ವತಃ ಕಾಂಗ್ರೆಸ್ ನಾಯಕರಾದ ರಣದೀಪ್ ಸರ್ಜೆವಾಲ ಟ್ವೀಟ್ ಮಾಡಿದ್ದರು. ಉತ್ತರ ಪ್ರದೇಶ ಚುನಾವಣೆಯಲ್ಲೂ ಕಾಂಗ್ರೆಸ್ ಕಿಶೋರ್ ರನ್ನು ಬಳಸಿಕೊಂಡಿತು. ಆದರೆ ಸಲಹೆಗಳ ಸರಿಯಾದ ಅನುಷ್ಠಾನದ ಕೊರತೆ, ಪಕ್ಷದೊಳಗಿನ ಜಂಭ ಮುತಾಂದ ಕಾರಣಗಳಿಂದ ಪಕ್ಷ ಹೀನಾಯವಾಗಿ ಸೋತಿತು ಬಿಜೆಪಿ 300 ಕ್ಕಿಂತ ಅಧಿಕ ಸ್ಥಾನಗಳಲ್ಲಿ ಗೆಲ್ಲುವಂತಾಯಿತೆಂದು ವಿಶ್ಲೇಷಿಸಲಾಗುತ್ತಿದೆ.

ಪ್ರಶಾಂತ್ ಕಿಶೋರ್ ಬಹುತೇಕ ಒರ್ವ ರಾಜಕೀಯ ಸ್ಟ್ಯಾಟರ್ಜಿಸ್ಟ್ ಆಗಿ ನೇಮಕ ಮಾಡಿಕೊಂಡ ಪಕ್ಷಗಳಿಗೆ ಗೆಲುವಿನ ಸೋಪಾನ ಕೊಟ್ಟದ್ದೆ ಹೆಚ್ಚು. ಅದು ಇತ್ತೀಚ್ಚಿಗೆ ನಡೆದ ಬಂಗಾಳದ ಚುನಾವಣೆಯಲ್ಲೂ ಸಾಬೀತಾಗಿದೆ. ಸ್ಟ್ಯಾಟರ್ಜಿಗಳ ಮುಖಾಂತರ ಸುಳ್ಳು ವರ್ಚಸ್ಸು ಸೃಷ್ಟಿಸಿ ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವದ ನಾಗರಿಕರನ್ನು ವಂಚಿಸುವ ಕಾರ್ಯಕ್ಕೆ ಮೊದಲು ಕೈ ಹಾಕಿದ್ದು ಬಿಜೆಪಿ. ಇದೀಗ ಪ್ರಶಾಂತ್ ಕಿಶೋರ್ ಬಿಜೆಪಿ ಪಾಲಿಗೆ ಕಂಟಕರಾಗುತ್ತಿದ್ದಾರೆ. ತಮಿಳುನಾಡಿನ ಡಿ.ಎಮ್.ಕೆ ಇರಬಹುದು.ಬಂಗಾಳದ ತೃಣಮೂಲ ಕಾಂಗ್ರೆಸ್ ಇರಬಹುದು. ಬಿಜೆಪಿಯನ್ನು ಹೀನಾಯವಾಗಿ ಮುಗ್ಗರಿಸುವಂತೆ ಮಾಡುವಲ್ಲಿ ಪ್ರಶಾಂತ್ ಕಿಶೋರ್ ಸ್ಟ್ಯಾಟರ್ಜಿ ಇದೆ ಎಂಬುವುದು ಸುಳ್ಳಲ್ಲ. ಬಿಜೆಪಿ ತೋಡಿದ ಖೆಡ್ಡಾಕ್ಕೆ ಬಿಜೆಪಿ ಬೀಳುತ್ತಿರುವುದು ಮೇಲ್ನೊಟಕ್ಕೆ ಕಾಣಿಸುತ್ತಿದೆ. ಪ್ರಶಾಂತ್ ಕಿಶೋರ್ ತೃತೀಯ ರಂಗವನ್ನು ಒಟ್ಟುಗೂಡಿಸುತ್ತಿದ್ದಾರೆ. ಶರದ್ ಅವರನ್ನು ಮುಂದಿಟ್ಟುಕೊಂಡು ಹಲವು ವಿರೋಧ ಪಕ್ಷಗಳ ನಾಯಕರೊಂದಿಗೆ ಸಭೆ ಸೇರಿಸಿ ಹೊಸ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ದಾರೆ. 2024 ರಲ್ಲಿ ಬಿಜೆಪಿ ಸೋಲಿಸುವುದು ಅವರ ಗುರಿ. ಅದಕ್ಕಾಗಿ ಆಗಿನಿಂದಲೇ ಸಿದ್ಧತೆ ನಡೆಸುತ್ತಿದ್ದಾರೆ. ನಮ್ಮಲ್ಲಿ ಬಹಳಷ್ಟು ಮಂದಿಗೆ ನಗು ಬರಬಹುದು ಮೂರು ವರ್ಷದ ಮೊದಲು ಯಾಕೆ ಇವರು ಸಿದ್ಧರಾಗುತ್ತಿದ್ದಾರೆಂದು ವಾಸ್ತವದಲ್ಲಿ 2024 ರ ಮೊದಲು ಬಿಜೆಪಿಯ ಬೆನ್ನು ಮೂಳೆ ಉತ್ತರ ಪ್ರದೇಶದ 2022 ಚುನಾವಣೆ ಅದನ್ನು ಬಿಜೆಪಿಯಿಂದ ಕಿತ್ತುಕೊಂಡರೆ ಬಿಜೆಪಿ ಬಹುತೇಕ ಖಾಲಿ ಚೀಲ. ಪ್ರಶಾಂತ್’ಗೆ ಆ ವಿಚಾರ ಗೊತ್ತು ಹಾಗಾಗಿ ಇದೀಗ ಬಿಜೆಪಿ ತಾನೇ ತೋಡಿದ ಖೆಡ್ಡಾದತ್ತ ಸೆಳೆಯಲಾಗುತ್ತಿದೆ. ಬೀಳುತ್ತೋ ಇಲ್ಲವೋ ಎಂಬುವುದನ್ನು ಮಾವುತನ ಕಾರ್ಯ ನೀತಿ ಅನುಷ್ಠಾನದ ನಂತರ ಲೆಕ್ಕಾಚಾರ ಹಾಕಬಹುದಾಗಿದೆ.

– ಯಾಸೀನ್ ಕೋಡಿಬೆಂಗ್ರೆ

(ವಕೀಲರು, ರಾಜಕೀಯ ಶಾಸ್ತ್ರ, ಸ್ನಾತಕೋತ್ತರ ವಿದ್ಯಾರ್ಥಿ)

Leave a Comment

Your email address will not be published.