ರಾಹುಲ್ ಗಾಂಧಿ ಅವರ 51ನೇ ಹುಟ್ಟು ಹಬ್ಬ ಮಮತೆಯ ತೋಟ್ಟಿಲು ಆಶ್ರಮದಲ್ಲಿ ಆಚರಣೆ

ರಾಹುಲ್ ಗಾಂಧಿ ಅವರ 51ನೇ ಹುಟ್ಟು ಹಬ್ಬದ ಪ್ರಯುಕ್ತ ಮಮತೆಯ ತೋಟ್ಟಿಲು ಆಶ್ರಮದಲ್ಲಿ ಉಡುಪಿ ಜಿಲ್ಲಾ ರಾಹುಲ್ ಗಾಂಧಿ ಬ್ರಿಗೇಡ್ ವತಿಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಬ್ರಿಗೇಡ್ ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ಜಮೀರ್ ಅವರ ನೇತೃತ್ವದಲ್ಲಿ ಆಶ್ರಮದ ಮಕ್ಕಳಿಗೆ 25 ಕುರ್ಚಿ, ಅಕ್ಕಿ, ಹಾಗೂ ಸಿಹಿ ತಿಂಡಿ ಹಂಚಿ ವಿಶೇಷ ರೀತಿಯಲ್ಲಿ ಮಕ್ಕಳ ಜೋತೆ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬದ ಪ್ರಯುಕ್ತ ಆಚರಣೆ ನಡೆಯಿತು

ಈ ಸಂದರ್ಭದಲ್ಲಿ ಸಮಾಜ ಸೇವಕ ಹಾಗೂ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಅವರು ಮಮತೆಯ ತೋಟಿಲು ಆಶ್ರಮದ ಕೆಲಸ ಕಾರ್ಯಗಳು ಶ್ಲಾಘನೀಯ ಈ ಆಶ್ರಮಕ್ಕೆ ಇನ್ನು ಮುಂದ ತಿಂಗಳಿಗೆ 50 ಕೆಜಿ ಅಕ್ಕಿಯನ್ನು ಒಂದು ವರ್ಷ ನಿರಂತರವಾಗಿ ಡಿಕೆಶಿ ಅಭಿಮಾನಿ ಬಳಗ, ಯೂತ್ ಕಾಂಗ್ರೆಸ್, ವಿದ್ಯಾರ್ಥಿ ಸಂಘಟನೆ, ರಾಹುಲ್ ಗಾಂಧಿ ಬ್ರಿಗೇಡ್ ವತಿಯಿಂದ ನೀಡುವುದಾಗಿ ಆಶ್ರಮದ ಆಡಳಿತ ಮಂಡಳಿಗೆ ತಿಳಿಸಿದ್ದರು.

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷರು ಯುವರಾಜ್, ನಗರ ಸಭೆ ಮಾಜಿ ಹಾಗೂ ಹಾಲಿ ಸದಸ್ಯರು ಅಮೃತ ಕೃಷ್ಣಮೂರ್ತಿ ಆಚಾರ್ಯ, ಜಿಲ್ಲಾ ವಿಧ್ಯಾರ್ಥಿ ಸಂಘಟನೆ ಅಧ್ಯಕ್ಷ ಸೌರಬ್ ಬಲ್ಲಳ್ , ಕೆಪಿಸಿಸಿ ಸೋಷಿಯಲ್ ಮೀಡಿಯಾ ಉಡುಪಿ ಜಿಲ್ಲೆ ಮಾಜಿ ಕೋ ಆರ್ಡಿನೇಟರ್ ಪ್ರಭಾಕರ ಆಚಾರ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಗುರು ಪ್ರಸಾದ್ ಶೆಟ್ಟಿ, ಡಿಕೆಶಿ ಅಭಿಮಾನಿ ಬಳಗದ ಉಪಾಧ್ಯಕ್ಷ ಮಹೇಶ್ ಸುವರ್ಣ ಮಲ್ಪೆ, ಪ್ರಧಾನ ಕಾರ್ಯದರ್ಶಿ ಗಣೇಶ್, ವಿಧ್ಯಾರ್ಥ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಸೋದ್, ಹಾಗೂ ಆಕ್ರಮ್, ಪ್ರಥಮ್ ಪೂಜಾರಿ, ಫಯಲ್, ಮುನ್ನ , ನದಿಮಾ,ನಿಯಾಜ್, ಕ್ರಿಷ್ಟನ್, ಮೂಫಿದ್,ಗಣೇಶ್ ಶೇರಿಗರ್, ಓಂಕರ್ ಸುನಿಲ್, ಮುಂತಾದವರು ಉಪಸ್ಥಿತರಿದರು.

Leave a Comment

Your email address will not be published.